{ ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ } - ೨
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ - ೨
ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಯಾಗಿರತ್ತೆ ?
ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು ಯಾಗಿರತ್ತೆ ? ? ಹಾವು ಯಾಗಿರತ್ತೆ ?
ಹಾವ ಇರುತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ತಳ ತಳ ಕೆಂಡದ ಕಣ್ಣು ಕಟ್ಟೆ ದಪ್ಪಗೆ
ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಯಾಗಿರತ್ತೆ ?
ಸೂರಿಗೆ ಸುತ್ತಿ ಜೋತಡುತ್ತೆ ಗೋದಿ ಬೆನ್ನು
ದೀಪದ ಹಾಗೆ ಹುರಿತಿರುತ್ತೆ ಹಾವಿನ ಕಣ್ಣು
ಬೂಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಹಿಡಿ ಹಿಡಿಯಾಗಿ ನುಗ್ ಬಿಡುತ್ತೆ ಹಕ್ಕಿ ಮೊಟ್ಟೆ
ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಹಕ್ಕಿಯ ಮೊಟ್ಟೆ ನುಗಿದ ಮೇಲೆ ಹಿಡಿ ಹಿಡಿಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಟ ಕೊಳುತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮ ನ ತೋಳಲ್ಲಿ - ೨
ನಿಟ್ಟುಸೀರ್ ಇಡ್ತತು ಇಲ್ಲ ಬಂಗಾರ
ಇನ್ನು ನಿನಗೆ ತಿಳಿಯದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ ಮೇಲೆ ಹೇಳೋದ್ ಇನ್ನೇನು - ೨
ಹಾವಿನ ಮೊಟ್ಟೆ ಹಾಗ್ ಬಿಡುತ್ತೆ ಹಕ್ಕಿ ಮೊಟ್ಟೇನು
__________________
Monday, October 4, 2010
ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಯಾಗಿರತ್ತೆ ?
Posted by Unknown at 5:39 PM 0 comments
Subscribe to:
Comments (Atom)